1 ಸಮುವೇಲನು 14 : 1 (KNV)
ಆ ಕಾಲದಲ್ಲಿ ಏನಾಯಿತಂದರೆ, ಸೌಲನಮಗನಾದ ಯೋನಾತಾನನು ತನ್ನ ಆಯು ಧಗಳನ್ನು ಹಿಡಿಯುವವನಾದ ಯೌವನಸ್ಥನಿಗೆ--ನಾವು ನಮಗೆದುರಾಗಿ ಆಚೆಯಲ್ಲಿರುವ ಫಿಲಿಷ್ಟಿಯರ ಠಾಣಕ್ಕೆ ಹೋಗೋಣ ಬಾ ಅಂದನು; ಆದರೆ ಅವನು ತನ್ನ ತಂದೆಗೆ ತಿಳಿಸಲಿಲ್ಲ.
1 ಸಮುವೇಲನು 14 : 2 (KNV)
ಸೌಲನು ಗಿಬೆಯ ಕಟ್ಟಕಡೇ ಮೇರೆಯಾದ ಮಿಗ್ರೋನಿನಲ್ಲಿರುವ ದಾಳಿಂಬರ ಗಿಡದ ಕೆಳಗಿದ್ದನು. ಅವನ ಸಂಗಡ ಸುಮಾರು ಆರು ನೂರು ಜನರಿದ್ದರು.
1 ಸಮುವೇಲನು 14 : 3 (KNV)
ಆಗ ಏಲಿಯ ಮಗನಾಗಿರುವ ಫೀನೆ ಹಾಸನ ಮಗನಾದ ಈಕಾಬೋದನ ಸಹೋದರನಾದ ಅಹೀಟೂಬನ ಮಗನಾದ ಅಹೀಯನು ಶೀಲೋವಿ ನಲ್ಲಿ ಎಫೋದನ್ನು ಧರಿಸಿಕೊಂಡು ಕರ್ತನ ಯಾಜಕ ನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.
1 ಸಮುವೇಲನು 14 : 4 (KNV)
ಯೋನಾತಾನನು ಫಿಲಿಷ್ಟಿ ಯರ ಠಾಣಕ್ಕೆ ದಾಟಿ ಹೋಗಬೇಕೆಂದು ಹುಡುಕಿದ ಮಾರ್ಗದ ಮಧ್ಯದಲ್ಲಿ ಈ ಕಡೆ ಆ ಕಡೆಯಲ್ಲಿ ಬೋಚೇಚ್‌ ಸೆನೆ ಎಂಬ ಚೂಪಾದ ಎರಡು ಬಂಡೆ ಗಳಿದ್ದವು.
1 ಸಮುವೇಲನು 14 : 5 (KNV)
ಆ ಬಂಡೆಗಳಲ್ಲಿ ಒಂದು ಉತ್ತರಕ್ಕೆ ಮಿಕ್ಮಾಷಿಗೆ ಎದುರಾಗಿಯೂ ಮತ್ತೊಂದು ದಕ್ಷಿಣಕ್ಕೆ ಗಿಬೆಗೆ ಎದುರಾಗಿಯೂ ಇತ್ತು.
1 ಸಮುವೇಲನು 14 : 6 (KNV)
ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.
1 ಸಮುವೇಲನು 14 : 7 (KNV)
ಅದಕ್ಕೆ ಅವನ ಆಯುಧಗಳನ್ನು ಹೊರುವವನು ಅವನಿಗೆ--ನಿನ್ನ ಹೃದಯದಲ್ಲಿ ಇರುವದನ್ನೆಲ್ಲಾ ಮಾಡು, ನಡೆ; ಇಗೋ, ನಿನ್ನ ಹೃದಯಕ್ಕೆ ಸರಿಯಾಗಿ ನಾನೂ ನಿನ್ನ ಸಂಗಡ ಇದ್ದೇನೆ ಅಂದನು.
1 ಸಮುವೇಲನು 14 : 8 (KNV)
ಆಗ ಯೋನಾತಾನನುಇಗೋ, ನಾವು ಆ ಮನುಷ್ಯರ ಬಳಿಗೆ ದಾಟಿ ಹೋಗಿ ಅವರಿಗೆ ಕಾಣಿಸಿಕೊಳ್ಳುವೆವು.
1 ಸಮುವೇಲನು 14 : 9 (KNV)
ಅವರು--ನಾವು ನಿಮ್ಮ ಬಳಿಗೆ ಬರುವ ವರೆಗೆ ಸುಮ್ಮನೆ ನಿಲ್ಲಿರೆಂದು ನಮ್ಮ ಸಂಗಡ ಹೇಳಿದರೆ ನಾವು ಅವರ ಬಳಿಗೆ ಹೋಗದೆ ನಮ್ಮ ಸ್ಥಳದಲ್ಲಿ ನಿಲ್ಲುವೆವು.
1 ಸಮುವೇಲನು 14 : 10 (KNV)
ಒಂದು ವೇಳೆ ಅವರುನಮ್ಮ ಬಳಿಗೆ ಬನ್ನಿರಿ ಎಂದು ಹೇಳಿದರೆ ಹೋಗುವೆವು. ಕರ್ತನು ಅವರನ್ನು ನಮ್ಮ ಕೈಗೆ ಒಪ್ಪಿಸಿ ಕೊಟ್ಟನೆಂಬದಕ್ಕೆ ಇದೇ ನಮಗೆ ಗುರುತಾಗಿರುವದು ಅಂದನು.
1 ಸಮುವೇಲನು 14 : 11 (KNV)
ಹಾಗೆಯೇ ಅವರಿಬ್ಬರೂ ಫಿಲಿಷ್ಟಿಯರ ಠಾಣದ ವರಿಗೆ ಕಾಣಿಸಿಕೊಂಡರು. ಆಗ ಫಿಲಿಷ್ಟಿಯರುಇಗೋ, ಗುಹೆಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಇಬ್ರಿಯರು ಹೊರಟು ಬರುತ್ತಾರೆಂದರು.
1 ಸಮುವೇಲನು 14 : 12 (KNV)
ಠಾಣದ ಮನುಷ್ಯರು ಯೋನಾತಾನನಿಗೂ ಅವನ ಆಯುಧ ಹೊರುವವನಿಗೂ--ನಮ್ಮ ಬಳಿಗೆ ಬನ್ನಿರಿ; ನಿಮಗೆ ಕಾರ್ಯ ತೋರಿಸುತ್ತೇವೆ ಎಂದು ಪ್ರತ್ಯುತ್ತರಕೊಟ್ಟರು. ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ವನಿಗೆ--ನನ್ನ ಹಿಂದೆ ಏರಿ ಬಾ; ಕರ್ತನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಟ್ಟನು ಅಂದನು.
1 ಸಮುವೇಲನು 14 : 13 (KNV)
ಯೋನಾತಾನನು ತನ್ನ ಕೈಗಳಿಂದಲೂ ಕಾಲುಗಳಿಂದ ಲೂ ಹತ್ತಿದನು. ಅವನ ಆಯುಧಗಳನ್ನು ಹೊರುವ ವನು ಅವನ ಹಿಂದೆ ಹತ್ತಿದನು. ಆಗ ಪಿಲಿಷ್ಟಿಯರು ಯೋನಾತಾನನ ಮುಂದೆ ಬಿದ್ದರು. ಅವನ ಆಯುಧ ಗಳನ್ನು ಹೊರುವವನು ಅವನ ಹಿಂದೆ ಕೊಲ್ಲುತ್ತಾ ಹೋದನು.
1 ಸಮುವೇಲನು 14 : 14 (KNV)
ಯೋನಾತಾನನೂ ಅವನ ಆಯುಧ ಗಳನ್ನು ಹೊರುವವನೂ ಹೊಡೆದ ಆ ಮೊದಲ ಸಂಹಾರದಲ್ಲಿ ಅರ್ಧ ಎಕರೆ ಭೂಮಿಯಲ್ಲಿ ಬಿದ್ದವರು ಸುಮಾರು ಇಪ್ಪತ್ತು ಜನರಾಗಿದ್ದರು.
1 ಸಮುವೇಲನು 14 : 15 (KNV)
ಆಗ ದಂಡಿನ ಹೊಲದಲ್ಲಿಯ ಸಕಲ ಜನರಲ್ಲಿಯೂ ಭಯದಿಂದ ನಡುಕ ಉಂಟಾಯಿತು. ಠಾಣದವರೂ ಕೊಳ್ಳೆಗಾರರೂ ಹೆದರಿಕೊಂಡರು; ಇದಲ್ಲದೆ ಭೂಮಿ ಕಂಪಿಸಿತು. ಹೀಗೆ ಅಲ್ಲಿ ಮಹಾದೊಡ್ಡ ಕಳವಳವಾಯಿತು.
1 ಸಮುವೇಲನು 14 : 16 (KNV)
ಬೆನ್ಯಾವಿಾ ನನ ದೇಶದ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ನೋಡಿದಾಗ ಇಗೋ, ಆ ಗುಂಪಿನವರು ಕಡಿಮೆ ಯಾಗುತ್ತಾ ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು.
1 ಸಮುವೇಲನು 14 : 17 (KNV)
ಆಗ ಸೌಲನು ತನ್ನ ಬಳಿಯಲ್ಲಿದ್ದ ಜನರಿಗೆ--ನಮ್ಮ ಬಳಿಯಿಂದ ಹೋದವರು ಯಾರೆಂದು ಲೆಕ್ಕವನ್ನು ನೋಡಿರಿ ಅಂದನು. ಅವರು ಲೆಕ್ಕ ನೋಡುವಾಗ ಇಗೋ, ಯೋನಾತಾನನೂ ಅವನ ಆಯುಧಗಳನ್ನು ಹೊರುವವನೂ ಅಲ್ಲಿ ಇರಲಿಲ್ಲ.
1 ಸಮುವೇಲನು 14 : 18 (KNV)
ಆಗ ಸೌಲನು ಅಹೀಯನಿಗೆ -- ನೀನು ದೇವರ ಮಂಜೂಷವನ್ನು ತಕ್ಕೊಂಡು ಬಾ ಅಂದನು. ಯಾಕಂದರೆ ದೇವರ ಮಂಜೂಷವು ಆ ಕಾಲದಲ್ಲಿ ಇಸ್ರಾಯೇಲ್‌ ಮಕ್ಕಳ ಬಳಿಯಲ್ಲಿತ್ತು.
1 ಸಮುವೇಲನು 14 : 19 (KNV)
ಸೌಲನು ಯಾಜಕನ ಸಂಗಡ ಇನ್ನೂ ಮಾತಾನಾಡುತ್ತಿರುವಾಗ ಏನಾಯಿತಂದರೆ ಫಿಲಿಷ್ಟಿಯರ ದಂಡಿನಲ್ಲಿ ಗದ್ದಲವು ಅಧಿಕವಾಗುತ್ತಾ ಇದದ್ದರಿಂದ ಸೌಲನು ಯಾಜಕನಿಗೆ ನಿನ್ನ ಕೈಯನ್ನು ಹಿಂದಕ್ಕೆ ತಕ್ಕೋ ಅಂದನು.
1 ಸಮುವೇಲನು 14 : 20 (KNV)
ಆಗ ಸೌಲನೂ ಅವನ ಸಂಗಡ ಇದ್ದ ಜನರೆಲ್ಲರೂ ಕೂಡಿಕೊಂಡು ಯುದ್ಧಕ್ಕೆ ಬಂದಾಗ ಇಗೋ, ಪ್ರತಿಯೊಬ್ಬನು ತನ್ನ ಜೊತೆಗಾರನನ್ನು ಕತ್ತಿ ಯಿಂದ ಕೊಂದುಬಿಟ್ಟದ್ದರ ಪರಿಣಾಮವಾಗಿ ಅಲ್ಲಿ ಬಹು ದೊಡ್ಡ ಸೋಲು ಉಂಟಾಯಿತು.
1 ಸಮುವೇಲನು 14 : 21 (KNV)
ಇದಲ್ಲದೆ ಪೂರ್ವದಲ್ಲಿ ಫಿಲಿಷ್ಟಿಯರ ಬಳಿಯಲ್ಲಿದ್ದು ಅವರ ಕೂಡ ದಂಡಿನ ಸಂಗಡ ಸುತ್ತಲಿರುವ ದೇಶದಿಂದ ಬಂದ ಇಬ್ರಿಯರು ಸೌಲ ಯೋನಾತಾನನ ಮತ್ತು ಇಸ್ರಾಯೇಲ್ಯರ ಸಂಗಡ ಕೂಡಿಕೊಂಡರು.
1 ಸಮುವೇಲನು 14 : 22 (KNV)
ಫಿಲಿಷ್ಟಿಯರು ಓಡಿಹೋದರೆಂದು ಎಫ್ರಾಯಿಮ್‌ ಬೆಟ್ಟದಲ್ಲಿ ಅಡಗಿಕೊಂಡಿದ್ದ ಸಮಸ್ತ ಇಸ್ರಾಯೇಲ್ಯರು ಕೇಳಿ ಅವರೂ ಹಾಗೆಯೇ ಯುದ್ಧದಲ್ಲಿ ಅವರನ್ನು ಬಿಡದೆ ಹಿಂದಟ್ಟಿದರು.
1 ಸಮುವೇಲನು 14 : 23 (KNV)
ಹೀಗೆ ಕರ್ತನು ಆ ದಿನದಲ್ಲಿ ಇಸ್ರಾಯೇಲನ್ನು ರಕ್ಷಿಸಿದನು. ಇದಲ್ಲದೆ ಆ ಯುದ್ಧವು ಬೇತಾವೆನಿನ ವರೆಗೂ ನಡೆಯಿತು.
1 ಸಮುವೇಲನು 14 : 24 (KNV)
ಆದರೆ ಇಸ್ರಾಯೇಲ್ಯರು ಆ ದಿವಸದಲ್ಲಿ ಬಹಳ ಬಳಲಿಹೋದರು. ಯಾಕಂದರೆ ಸೌಲನು--ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾ ಲದ ವರೆಗೆ ಯಾವನು ಆಹಾರ ತಿನ್ನುತ್ತಾನೋ ಅವನು ಶಪಿಸಲ್ಪಡಲಿ ಎಂದು ಆಣೆ ಇಟ್ಟದ್ದರಿಂದ ಜನರೆಲ್ಲರೂ ಆಹಾರದ ರುಚಿ ನೋಡದೆ ಇದ್ದರು.
1 ಸಮುವೇಲನು 14 : 25 (KNV)
ದೇಶದ ಜನರೆಲ್ಲರು ಅಡವಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲೆ ಜೇನು ತುಪ್ಪ ಇತ್ತು.
1 ಸಮುವೇಲನು 14 : 26 (KNV)
ಜನರು ಆ ಅಡವಿಯಲ್ಲಿ ಹೋಗುವಾಗ ಇಗೋ, ಜೇನು ತುಪ್ಪ ಸುರಿಯುತ್ತಿತ್ತು; ಆದರೆ ಜನರು ಆ ಆಣೆಯ ನಿಮಿತ್ತ ಭಯಪಟ್ಟದ್ದ ರಿಂದ ಒಬ್ಬನಾದರೂ ತನ್ನ ಬಾಯಿಗೆ ಹಾಕಿಕೊಳ್ಳಲಿಲ್ಲ.
1 ಸಮುವೇಲನು 14 : 27 (KNV)
ಆದರೆ ತನ್ನ ತಂದೆಯು ಜನರಿಗೆ ಆಣೆ ಇಟ್ಟದ್ದನ್ನು ಯೋನಾತಾನನು ಕೇಳದೆ ಇದ್ದ ಕಾರಣ ತನ್ನ ಕೈಯಲ್ಲಿದ್ದ ಕೋಲನ್ನು ಚಾಚಿ ಅದನ್ನು ಜೇನು ತೊಟ್ಟಿ ಯಲ್ಲಿ ಅದ್ದಿ ತನ್ನ ಬಾಯಿಗೆ ಹಾಕಿಕೊಂಡನು. ಅವನ ಕಣ್ಣುಗಳು ಕಳೆಯನ್ನು ಹೊಂದಿದವು.
1 ಸಮುವೇಲನು 14 : 28 (KNV)
ಆಗ ಜನರಲ್ಲಿ ಒಬ್ಬನು ಅವನಿಗೆ--ಈ ಹೊತ್ತು ಆಹಾರ ತಿನ್ನುವವನು ಶಪಿಸಲ್ಪಡಲಿ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ ಅಂದನು.
1 ಸಮುವೇಲನು 14 : 29 (KNV)
ಅದಕ್ಕೆ ಯೋನಾ ತಾನನು--ನನ್ನ ತಂದೆಯು ದೇಶವನ್ನು ಶ್ರಮೆಪಡಿಸಿ ದ್ದಾನೆ. ಇಗೋ, ನಾನು ಜೇನುತುಪ್ಪದಲ್ಲಿ ಸ್ವಲ್ಪ ರುಚಿ ನೋಡಿದ್ದರಿಂದ ನನ್ನ ಕಣ್ಣಗಳು ಹೇಗೆ ಕಳೆಯನ್ನು ಹೊಂದಿದವೆಂದು ನೋಡು.
1 ಸಮುವೇಲನು 14 : 30 (KNV)
ಈ ದಿನದಲ್ಲಿ ಜನರು ತಮಗೆ ದೊರಕಿದ ತಮ್ಮ ಶತ್ರುಗಳ ಕೊಳ್ಳೆಯಲ್ಲಿ ಯಾವದನ್ನಾದರೂ ಉಚಿತವಾಗಿ ತಿಂದಿದ್ದರೆ ಎಷ್ಟು ಚೆನ್ನಾಗಿತ್ತು; ಯಾಕಂದರೆ ಫಿಲಿಷ್ಟಿಯರಲ್ಲಿ ಸಂಹರಿಸ ಲ್ಪಡದವರು ಇನ್ನೂ ಹೆಚ್ಚು ಮಂದಿ ಇದ್ದಾರೆ ಅಂದನು.
1 ಸಮುವೇಲನು 14 : 31 (KNV)
ಜನರು ಆ ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋ ನಿನ ವರೆಗೂ ಫಿಲಿಷ್ಟಿಯರನ್ನು ಸದೆಬಡಿದದರಿಂದ ಅವರು ಬಹಳವಾಗಿ ದಣಿದುಹೋದರು.
1 ಸಮುವೇಲನು 14 : 32 (KNV)
ಆದದ ರಿಂದ ಅವರು ಕೊಳ್ಳೇ ಮಾಡಿದವುಗಳ ಮೇಲೆ ಬಿದ್ದು ಕುರಿಗಳನ್ನೂ ದನಗಳನ್ನೂ ಕರುಗಳನ್ನೂ ಹಿಡಿದು ನೆಲದ ಮೇಲೆ ಕೊಯ್ದು ಮಾಂಸವನ್ನು ರಕ್ತದೊಂದಿಗೆ ತಿಂದರು.
1 ಸಮುವೇಲನು 14 : 33 (KNV)
ಆಗ ಅವರು ಸೌಲನಿಗೆ--ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವದರಿಂದ ಕರ್ತನಿಗೆ ವಿರೋಧವಾಗಿ ಪಾಪ ಮಾಡುತ್ತಾರೆಂದು ತಿಳಿಸಿದರು. ಅದಕ್ಕವನು--ನೀವು ದ್ರೋಹ ಮಾಡಿ ದಿರಿ; ಈಗ ಒಂದು ದೊಡ್ಡಕಲ್ಲನ್ನು ನನ್ನ ಬಳಿಗೆ ಹೊರ ಳಿಸಿ ಬಿಡಿರಿ ಅಂದನು.
1 ಸಮುವೇಲನು 14 : 34 (KNV)
ಸೌಲನು ಅವರಿಗೆ--ನೀವು ಜನರಲ್ಲಿ ಚದರಿಹೋಗಿ ರಕ್ತ ಸಹಿತವಾಗಿ ತಿಂದು ಕರ್ತನಿಗೆ ವಿರೋಧವಾಗಿ ಪಾಪಮಾಡದೆ ಪ್ರತಿಯೊ ಬ್ಬನು ತನ್ನ ಎತ್ತನ್ನೂ ಕುರಿಯನ್ನೂ ನನ್ನ ಬಳಿಗೆ ತಂದು ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ ಅಂದನು. ಆದದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ಆ ರಾತ್ರಿಯಲ್ಲಿ ತನ್ನ ಸಂಗಡ ತಕ್ಕೊಂಡು ಬಂದು ಅಲ್ಲಿ ಕೊಯ್ದರು.
1 ಸಮುವೇಲನು 14 : 35 (KNV)
ಸೌಲನು ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸಿದನು. ಅದೇ ಅವನು ಕಟ್ಟಿಸಿದ ಮೊದಲನೇ ಬಲಿಪೀಠವು.
1 ಸಮುವೇಲನು 14 : 36 (KNV)
ಸೌಲನು ಜನರಿಗೆ--ನಾವು ಈ ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿಹೋಗಿ ಉದಯಕಾಲದ ವರೆಗೆ ಅವರನ್ನು ಸುಲುಕೊಂಡು ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು ಅಂದನು. ಅದಕ್ಕೆ ಜನರು--ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವದನ್ನೆಲ್ಲಾ ಮಾಡು ಅಂದರು. ಆಗ ಯಾಜಕನು--ದೇವರ ಸನ್ನಿಧಿಗೆ ಹೋಗೋಣ ಅಂದನು.
1 ಸಮುವೇಲನು 14 : 37 (KNV)
ಸೌಲನು--ನಾನು ಫಿಲಿಷ್ಟಿಯರನ್ನು ಹಿಂಬಾಲಿಸಿ ಹೋಗಲೋ? ನೀನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಡುವಿಯೋ ಎಂದು ದೇವರ ಆಲೋಚನೆಯನ್ನು ಕೇಳಿದನು; ಆದರೆ ಆತನು ಅವನಿಗೆ ಆ ದಿವಸದಲ್ಲಿ ಪ್ರತ್ಯುತ್ತರ ಕೊಡದೆ ಹೋದನು.
1 ಸಮುವೇಲನು 14 : 38 (KNV)
ಆಗ ಸೌಲನು--ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ; ಈಹೊತ್ತು ಈ ಪಾಪ ಯಾವದರಿಂದ ಉಂಟಾಯಿತೆಂದು ತಿಳುಕೊಂಡು ನೋಡಿರಿ.
1 ಸಮುವೇಲನು 14 : 39 (KNV)
ನನ್ನ ಕುಮಾರನಾದ ಯೋನಾತಾನ ನಿಂದಾದರೂ ಉಂಟಾಗಿದ್ದರೆ ಅವನು ಸಾಯಲೇ ಸಾಯುವನೆಂದು ಇಸ್ರಾಯೇಲನ್ನು ರಕ್ಷಿಸುವ ಕರ್ತನ ಮೇಲೆ ಆಣೆ ಇಟ್ಟು ಹೇಳುತ್ತೇನೆ ಅಂದನು. ಆದರೆ ಸಕಲ ಜನರಲ್ಲಿ ಒಬ್ಬನಾದರೂ ಅವನಿಗೆ ಪ್ರತ್ಯುತ್ತರ ಕೊಡಲಿಲ್ಲ.
1 ಸಮುವೇಲನು 14 : 40 (KNV)
ಆಗ ಸೌಲನು ಸಮಸ್ತ ಇಸ್ರಾಯೇ ಲಿಗೆ--ನೀವು ಒಂದು ಕಡೆಯಲ್ಲಿ ಇರ್ರಿ; ನಾನೂ ನನ್ನ ಮಗನಾದ ಯೋನಾತಾನನೂ ಒಂದು ಕಡೆಯಲ್ಲಿ ಇರುತ್ತೇವೆ ಅಂದನು. ಜನರು ಸೌಲನಿಗೆ--ನಿನ್ನ ದೃಷ್ಟಿಗೆ ಒಳ್ಳೇದಾಗಿ ತೋರುವದನ್ನು ಮಾಡು ಅಂದರು.
1 ಸಮುವೇಲನು 14 : 41 (KNV)
ಸೌಲನು ಇಸ್ರಾಯೇಲಿನ ದೇವರಾದ ಕರ್ತನಿಗೆ--ನೀನು ಪೂರ್ಣ ನಿರ್ಣಯವನ್ನು ದಯಪಾಲಿಸು ಎಂದು ಹೇಳಿ ಚೀಟು ಹಾಕಿದೆನು ಅಂದನು. ಸೌಲನಿಗೂ ಯೋನಾತಾನನಿಗೂ ಚೀಟುಬಂತು.
1 ಸಮುವೇಲನು 14 : 42 (KNV)
ಆದರೆ ಜನರು ಪಾರಾದರು. ಸೌಲನು ಅವರಿಗೆ--ನನ್ನ ಮೇಲೆಯೂ ನನ್ನ ಮಗನಾದ ಯೋನಾತಾನನ ಮೇಲೆಯೂ ಚೀಟು ಹಾಕಿರಿ ಅಂದಾಗ ಯೋನಾತಾನನಿಗೆ ಚೀಟು ಬಿತ್ತು.
1 ಸಮುವೇಲನು 14 : 43 (KNV)
ಆಗ ಸೌಲನು ಯೋನಾತಾನನಿಗೆ--ನೀನು ಮಾಡಿ ದ್ದನ್ನು ನನಗೆ ತಿಳಿಸು ಅಂದನು. ಅದಕ್ಕೆ ಯೋನಾ ತಾನನು--ನನ್ನ ಕೈಯಲ್ಲಿರುವ ಕೋಲಿನ ಕೊನೆಯಿಂದ ನಾನು ಸ್ವಲ್ಪ ಜೇನು ತುಪ್ಪವನ್ನು ತಕ್ಕೊಂಡು ರುಚಿ ನೋಡಿದೆನು; ಇಗೋ, ನಾನು ಸಾಯಬೇಕು ಅಂದನು.
1 ಸಮುವೇಲನು 14 : 44 (KNV)
ಅದಕ್ಕೆ ಸೌಲನು--ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ ಅಂದನು.
1 ಸಮುವೇಲನು 14 : 45 (KNV)
ಆದರೆ ಜನರು ಸೌಲನಿಗೆ--ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆ ಯನ್ನುಂಟು ಮಾಡಿದ ಯೋನಾತಾನನು ಸಾಯ ಬಹುದೋ? ಅದು ಎಂದಿಗೂ ಆಗದು; ಅವನು ಇಂದು ಕರ್ತನ ಸಹಾಯದ ಮೂಲಕ ಕಾರ್ಯವನ್ನು ನಡಿಸಿದ್ದರಿಂದ ಕರ್ತನ ಆಣೆ, ಅವನ ತಲೆಯಲ್ಲಿರುವ ಒಂದು ಕೂದಲಾದರೂ ನೆಲದ ಮೇಲೆ ಬೀಳಬಾರದು ಅಂದರು. ಜನರು ಯೋನಾತಾನನನ್ನು ಸಾಯದ ಹಾಗೆ ಬಿಡಿಸಿಕೊಂಡರು.
1 ಸಮುವೇಲನು 14 : 46 (KNV)
ಆಗ ಸೌಲನು ಫಿಲಿಷ್ಟಿಯರನ್ನು ಹಿಂಬಾಲಿಸುವದನ್ನು ಬಿಟ್ಟುಬಿಟ್ಟನು. ಫಿಲಿಷ್ಟಿಯರು ತಮ್ಮ ಸ್ಥಳಕ್ಕೆ ಹೋದರು.
1 ಸಮುವೇಲನು 14 : 47 (KNV)
ಹೀಗೆ ಸೌಲನು ಇಸ್ರಾಯೇಲಿನ ಮೇಲೆ ದೊರೆ ತನ ತಕ್ಕೊಂಡು ಸುತ್ತಲಿರುವ ತನ್ನ ಸಮಸ್ತ ಶತ್ರುಗ ಳಾದ ಮೋವಾಬ್ಯರ ಮೇಲೆಯೂ ಅಮ್ಮೋನನ ಮಕ್ಕಳ ಮೇಲೆಯೂ ಎದೋಮ್ಯರ ಮೇಲೆಯೂ ಚೋಬದ ಅರಸುಗಳ ಮೇಲೆಯೂ ಫಿಲಿಷ್ಟಿಯರ ಮೇಲೆಯೂ ಯುದ್ಧಮಾಡಿದನು. ಯಾರ ಮೇಲೆ ತಿರುಗಿದನೋ ಅವರನ್ನು ಪೀಡಿಸಿದನು.
1 ಸಮುವೇಲನು 14 : 48 (KNV)
ಅವನು ಸೈನ್ಯವನ್ನು ಕೂಡಿಸಿ ಕೊಂಡು ಅಮಾಲೇಕ್ಯರನ್ನು ಸಂಹರಿಸಿದನು; ಇಸ್ರಾ ಯೇಲನ್ನು ಸುಲುಕೊಳ್ಳುವವರೆಲ್ಲರ ಕೈಗೂ ತಪ್ಪಿಸಿ ಬಿಟ್ಟನು.
1 ಸಮುವೇಲನು 14 : 49 (KNV)
ಸೌಲನ ಕುಮಾರರ ಹೆಸರುಗಳು ಯೋನಾ ತಾನ್‌ ಇಷ್ವಿ ಮಲ್ಕೀಷೂವ ಎಂಬಿವುಗಳು; ಹಿರಿಯ ವಳಾದ ಮೇರಾಬ್‌, ಚಿಕ್ಕವಳಾದ ವಿಾಕಲ್‌ ಎಂಬ ಇಬ್ಬರು ಕುಮಾರ್ತೆಯರು ಇದ್ದರು.
1 ಸಮುವೇಲನು 14 : 50 (KNV)
ಅಹೀಮಾಚನ ಕುಮಾರ್ತೆಯಾದ ಅಹೀನೋವಮಳು ಸೌಲನ ಹೆಂಡತಿಯಾಗಿದ್ದಳು. ಸೌಲನ ಚಿಕ್ಕಪ್ಪನಾದ ನೇರನ ಮಗನಾದ ಅಬ್ನೇರನೆಂಬವನು ಅವನ ಸೈನ್ಯಾಧಿಪತಿ ಯಾಗಿದ್ದನು.
1 ಸಮುವೇಲನು 14 : 51 (KNV)
ಕೀಷನೆಂಬವನು ಸೌಲನ ತಂದೆಯು. ಅಬ್ನೇರನ ತಂದೆಯಾದ ನೇರನು ಅಬೀಯೇಲನ ಮಗನು.ಇದಲ್ಲದೆ ಸೌಲನು ಇದ್ದ ದಿವಸಗಳೆಲ್ಲಾ ಫಿಲಿಷ್ಟಿಯರ ಮೇಲೆ ಬಲವಾದ ಯುದ್ಧವು ನಡೆಯಿತು. ಸೌಲನು ಯಾವ ಪರಾಕ್ರಮಶಾಲಿಯನ್ನಾದರೂ ಧೈರ್ಯಶಾಲಿಯನ್ನಾದರೂ ನೋಡಿದರೆ ಅವನನ್ನು ತನ್ನ ಬಳಿಯಲ್ಲಿ ಸೇರಿಸಿಕೊಳ್ಳುತ್ತಾ ಇದ್ದನು.
1 ಸಮುವೇಲನು 14 : 52 (KNV)
ಇದಲ್ಲದೆ ಸೌಲನು ಇದ್ದ ದಿವಸಗಳೆಲ್ಲಾ ಫಿಲಿಷ್ಟಿಯರ ಮೇಲೆ ಬಲವಾದ ಯುದ್ಧವು ನಡೆಯಿತು. ಸೌಲನು ಯಾವ ಪರಾಕ್ರಮಶಾಲಿಯನ್ನಾದರೂ ಧೈರ್ಯಶಾಲಿಯನ್ನಾದರೂ ನೋಡಿದರೆ ಅವನನ್ನು ತನ್ನ ಬಳಿಯಲ್ಲಿ ಸೇರಿಸಿಕೊಳ್ಳುತ್ತಾ ಇದ್ದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52

BG:

Opacity:

Color:


Size:


Font: